ಕೆಲವ್ರು ಸೂಪರ್ ಮ್ಯಾನ್.. ಭಗವಾನ್ ಆಗಲು ಬಯಸುತ್ತಾರೆ; ಮೋಹನ್ ಭಾಗವತ್ ಹೇಳಿದ್ದು ಯಾರಿಗೆ?

author-image
admin
Updated On
ಕೆಲವ್ರು ಸೂಪರ್ ಮ್ಯಾನ್.. ಭಗವಾನ್ ಆಗಲು ಬಯಸುತ್ತಾರೆ; ಮೋಹನ್ ಭಾಗವತ್ ಹೇಳಿದ್ದು ಯಾರಿಗೆ?
Advertisment
  • ಆರ್‌.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಹೇಳಿಕೆ
  • ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾರ್ಮಿಕ ನುಡಿ
  • ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನೇ ಗುರಿಯಾಗಿಸಿಕೊಂಡ್ರಾ?

2024ರ ಲೋಕಸಭಾ ಚುನಾವಣೆ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ RSSಗೆ ಬೇಸರ ಮೂಡಿದ್ಯಾ? ಆರ್‌.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಇಂತಹದೊಂದು ಅನುಮಾನ ಮೂಡುವಂತೆ ಮಾಡಿದೆ. ವಿಪಕ್ಷ ಕಾಂಗ್ರೆಸ್ ಅಂತೂ ಮೋಹನ್ ಭಾಗವತ್ ಅವರು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿಯೇ ಹೀಗೆ ಪರೋಕ್ಷವಾಗಿ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

publive-image

ಮೋಹನ್ ಭಾಗವತ್ ಹೇಳಿದ್ದೇನು?
ಜಾರ್ಖಂಡ್ ರಾಜ್ಯದ ಬಿಷ್ಣಾಪುರದಲ್ಲಿ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮೋಹನ್ ಭಾಗವತ್ ಅವರು ಭಾಷಣ ಮಾಡಿದರು. ಈ ವೇಳೆ ಜನರು ಸೂಪರ್ ಮ್ಯಾನ್‌ಗಳಾಗಲು ಬಯಸುತ್ತಾರೆ. ಆದರೆ ಅದು ಅಲ್ಲಿಗೆ ನಿಲ್ಲಲ್ಲ. ಬಳಿಕ ಜನರು ದೇವತಾಗಳಾಗಲು ಬಯಸುತ್ತಾರೆ. ಬಳಿಕ ಭಗವಾನ್ ಆಗಲು ಬಯಸುತ್ತಾರೆ. ಆದರೆ ಭಗವಾನ್ ಹೇಳುತ್ತಾರೆ ತಾನು ವಿಶ್ವರೂಪ ಅಂತ. ಆದರೆ ವಿಶ್ವರೂಪಕ್ಕೂ ದೊಡ್ಡದು ಇದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.


">July 18, 2024

ಅಂತಿಮವಾಗಿ ಆರ್‌.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಭಿವೃದ್ದಿಗೆ ಯಾವುದೇ ಕೊನೆ ಎಂಬುದೇ ಇಲ್ಲ. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲಿ ಹೆಚ್ಚಿನದ್ದನ್ನು ಸಾಧಿಸಲು ದುಡಿಯಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಬಳಿಕ ಯೋಗಿಗೆ ಶುರುವಾಯ್ತು ಅಗ್ನಿ ಪರೀಕ್ಷೆ.. ಯುಪಿ ಕೇಸರಿ ಪಡೆಯಲ್ಲಿ ಭುಗಿಲೆದ್ದ ಬಂಡಾಯ; ಆಗಿದ್ದೇನು? 

ಮೋಹನ್ ಭಾಗವತ್ ಅವರು ಹೇಳಿರೋ ಈ ಮಾತು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಪಕ್ಷ ಇದು ದೆಹಲಿಯ 7 ಲೋಕಕಲ್ಯಾಣ್ ಮಾರ್ಗವನ್ನು ಗುರಿಯಾಗಿಸಿಕೊಂಡು ಭಾಗವತ್ ಹೇಳಿಕೆ ನೀಡಿದ್ದಾರೆ ಎಂದು ಹೇಳಿದೆ. ಭಾಗವತ್ ಅವರ ವಿಶ್ವರೂಪದ ಮಾತು ಪರೋಕ್ಷವಾಗಿ ಮೋದಿ ಅವರನ್ನೇ ಗುರಿಯಾಗಿಸಿಕೊಂಡಿರೋದು ಬಹಳ ಚರ್ಚೆಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment